ಮೊದಲ ರಾತ್ರಿ

4 Dec

ಇಂದಿನ ಧೃತರಾಷ್ಟ್ರ ಮತ್ತು ಗಾಂಧಾರಿ

ಧೃತರಾಷ್ಟ್ರ ಒಬ್ಬ ಸಾಮಾನ್ಯ ಮಧ್ಯಮ ವರ್ಗದ ಯುವಕ ಯಥಾ ಪ್ರಕಾರ ಇಂಜಿನಿಯರಿಂಗ್ ಮುಗಿಸಿ ಬೆಂಗಳೂರಿನ ಹೊರವಲಯದಲ್ಲಿರುವ ಎರಡು ಕಾಸು ಸಂಬಳ ಕೊಡುವ ಸಾಫ್ಟ್ವೇರ್ ಫ್ಯಾಕ್ಟರಿಗೆ ಜೀತದಾಳಾಗಿ ಸೇರಿಕೊಂಡ.  ಒಂದೆರಡು ವರ್ಷದ ಜೀತದ ನಂತರ ಇವನ ಕೆಲಸ ಮೆಚ್ಚಿದ ಮಾಲೀಕರು ಜೀತ ಮಾಡಲು ಮಾಯಾ ನಗರಿ ಅಮೇರಿಕಕ್ಕೆ ಕಲಿಸಿದುರು.  ಆರು ತಿಂಗಳ ನಂತರ ಹೆತ್ತವರ ಒತ್ತಾಯದ ಮೇಲೆ ಊರಿಗೆ ಬಂದು ಹಲವಾರು ಸುಂದರ ಹುಡುಗಿಯರನ್ನು ಸಂದರ್ಶಿಷಿ ಒಬ್ಬ ವಿದ್ಯಾವಂತ ರೂಪವತಿಯನ್ನು ವಿವಹವಾದ.  ಅವರ ಮೊದಲ ರಾತ್ರಿಯ ಸಂಭಾಷಣೆ ಹೇಗಿತ್ತು.

ಧೃತರಾಷ್ಟ್ರ : ಹಾ ಪ್ರಿಯೆ ನೀನೆಂಥ ರೂಪವತಿ ಮತ್ತು ವಿದ್ಯಾವಂತೆ, ನಾನು ಅದಕ್ಕೆ ನಿನ್ನ ವಿವಾಹವಾಗಿದ್ದು.   ನಾನಂತೂ ಸಾಫ್ಟ್ವೇರ್ ಜೀತ ಮಾಡುತೇನೆ ಅಂದ್ರೇ ಬಹಳ ಬೆಲೆಯುಳ್ಳ ಗಂಡು.  ನಾನು ನಿನ್ನ ವಿವಾಹವಾಗಿದ್ದು ನಿನ್ನ ಪುಣ್ಯವೇ ಸರಿ. ನೀನು ನನಗಾಗಿ ಏನು ಮಾಡುತ್ತೀಯ?
ರೂಪವತಿ ಗಾಂಧಾರಿ:  ಪ್ರಿಯಾ ನೀವು ತುಂಬಾ ಒಳ್ಳೇ ಗಂಡು ಅನ್ನೋದು ಸರಿ.  ನನಗೆ ನಿಮ್ಮಂತ ಗಂಡ ಸಿಕ್ಕೊರೋದು ನನ್ನ ಪುಣ್ಯವೇ ಸರಿ.  ಆದ್ರೆ ನಾನೂ ವಿದ್ಯಾವಂತೆ ಒಳ್ಳೆಯ ಕೆಲಸದಲ್ಲಿ ಇದ್ದೀನಿ, ಕೈತುಂಬಾ ಸಂಬಳ ತರುತ್ತೇನಿ. ಹಾಗಾಗಿ ನಾನು ನಿಮಗೆ ತಕ್ಕಂತ ಮತ್ತು ಸರಿಯಾದ ಜೋಡಿಯೆಂದು ಭಾವಿಸಿದ್ದೀನಿ. ನಿಮಗೆ ನನ್ನಂತ ಹೆಂಡತಿ ಸಿಕ್ಕಿರೋದು ನಿಮ್ಮ ಪುಣ್ಯ ಅಲ್ವ?
ಧೃತರಾಷ್ಟ್ರ:  ನಿನಗೆ ನಾನು ಸಿಕ್ಕಿರೋದು ಪುಣ್ಯ ಅಂತ ಒಪ್ಪಿಕೊಂದ್ಯಲ್ಲ  ಹಾಗಾದ್ರೆ ಹೇಳು ನೀನು ನನಗಾಗಿ ಏನು ಮಾಡುತೀಯ?
ಗಾಂಧಾರಿ: (ಕೊಂಚ ಹುಬ್ಬು ಗಂಟು ಹಾಕಿಕೊಂಡು) ನಿಮಗೆ ಏನು ಬೇಕು ಕೇಳಿ?
ಧೃತರಾಷ್ಟ್ರ: ನನಗಾಗಿ ನೀನು ಎರಡು ಕಣ್ಣುಗಳನ್ನೂ ತೆಗಎದುಕೊಳ್ಳುವೆಯಾ?
ಗಾಂಧಾರಿ: (ತುಂಬಾ ಕೋಪಗೊಂಡು) #$@!%&^@ ನಾನು ನಿಮಗೆ ಏನನ್ನೂ ಕೊಡುವುದಿಲ್ಲ.  ನನಗೆ ತುಂಬಾ ನಿದ್ದೆ ಬರ್ತಾ ಇದೇ ಮಲಕ್ಕೊತೀನಿ.
ಧೃತರಾಷ್ಟ್ರ: ಕೋಪವೇಕೆ ಮದುಕೊಳ್ಳುವೆ ಪ್ರಿಯೆ, ಸ್ವಲ್ಪ ಚೌಕಾಶಿ ಮಾಡೋಣ.  ಒಂದು ಕಣ್ಣದ್ರೊ ಕೊಡುವೆಯಾ?
ಗಾಂಧಾರಿ : ನಾನು ಏನೂ ಕೊಡುವುದಿಲ್ಲ ಮಲಗಿಕೊಳ್ಳಿ.
ಧೃತರಾಷ್ಟ್ರ: (ಕೋಪ ತಾರಕ್ಕೇರಿ) ನಿನ್ನಂತಾ ಹುಡುಗಿಯರಿಗೆ ಕೊಬ್ಬು ಜಾಸ್ತಿ, ನಾನು ಅರ್ಧ ಕೆಳಗಿಳಿದರು ನೀನು ಒಂದು ಹೆಜ್ಜೆ ನನ್ನಂತೆ ಇಡುವುದಿಲ್ಲ.  #ಎ$@@

Advertisements

Leave a Reply

Fill in your details below or click an icon to log in:

WordPress.com Logo

You are commenting using your WordPress.com account. Log Out /  Change )

Google photo

You are commenting using your Google account. Log Out /  Change )

Twitter picture

You are commenting using your Twitter account. Log Out /  Change )

Facebook photo

You are commenting using your Facebook account. Log Out /  Change )

Connecting to %s

%d bloggers like this: